ಕರ್ನಾಟಕ ರಾಜ್ಯದಲ್ಲಿ ನಿಷೇಧವನ್ನು ತೆರವುಗೊಳಿಸಿದ ನಂತರ 1968ನೇ ಇಸವಿಯಲ್ಲಿ ಕರ್ನಾಟಕ ಅಬಕಾರಿ ಇಲಾಖೆಯು ಅಸ್ಥಿತ್ವಕ್ಕೆ ಬಂದಿದೆ. ರಾಜ್ಯ ಅಬಕಾರಿ ಇಲಾಖೆಯ ಆಡಳಿತದ ವ್ಯಾಪ್ತಿಯು ಮದ್ಯಸಾರ, ಭಾರತೀಯ ಮದ್ಯ, ಬೀರ್, ಔಷಧೀಯ ಮತ್ತು ಪ್ರಸಾಧನ ತಯಾರಿಕೆಗಳು ಇತ್ಯಾದಿ ಪದಾರ್ಥಗಳನ್ನು ಒಳಗೊಳ್ಳುತ್ತದೆ. ಕಚ್ಛಾ ವಸ್ತುಗಳನ್ನು ನಿಯಮಿತವಾಗಿ ಪಡೆದು, ಅವುಗಳನ್ನು ಉಪಯೋಗಿಸಿ ಹಲವಾರು ಸರಕುಗಳ ತಯಾರಿಕೆ, ಅವುಗಳ ಸಂಗ್ರಹಣೆ ಮತ್ತು ವಿತರಣೆ ಮೂಲಕ ಸಾರ್ವಜನಿಕ ಸ್ವಾಸ್ಥ್ಯದ ಭರವಸೆ ನೀಡುವುದು ಇಲಾಖೆಯ ಉದ್ಧೇಶಗಳೆಂದು ಸಂಕ್ಷಿಪ್ತಗೊಳಿಸಬಹುದಾಗಿದೆ. ಈ ನಿಬಂಧನೆಗಳು ರಾಜ್ಯದ ಬೊಕ್ಕಸಕ್ಕೆ ರಾಜಸ್ವವು ಸರಿಯಾದ ರೀತಿಯಲ್ಲಿ ಬರುವುದನ್ನು ಖಚಿತಪಡಿಸುತ್ತದೆ. ಈ ರೀತಿಯಾಗಿ, ಕರ್ನಾಟಕದಲ್ಲಿ ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ರಾಜ್ಯದಲ್ಲಿ ಎರಡನೇ ಅತಿದೊಡ್ಡ ರಾಜಸ್ವ ಗಳಿಸುವ ಇಲಾಖೆಯಾಗಿದೆ.

ಗುರಿ

ಸುರಕ್ಷಿತವಲ್ಲದ ಮದ್ಯದ ಉಪಯೋಗವನ್ನು ನಿರ್ಬಂಧಿಸುವಾಗ ಅಬಕಾರಿ ರಾಜಸ್ವವವನ್ನು ವೃದ್ಧಿಸುವಿಕೆ ಮತ್ತು ಆರೋಗ್ಯಕರ ವಾತಾವರಣದಲ್ಲಿ ಸೇವನೆಯ ಭರವಸೆ ನೀಡುವುದು.

ಧ್ಯೇಯೋಧ್ದೇಶ

ಮದ್ಯಸಾರ, ಮದ್ಯಸಾರಗಳ ತಯಾರಿಕೆ, ಸೇವನೀಯ ಮದ್ಯ ಮತ್ತು ಇತರೆ ಮಾದಕಗಳ ತಯಾರಿಕೆ, ಸಾಗಾಣಿಕೆ, ಸ್ವಾಧೀನತೆ, ಮಾರಾಟ ಮತ್ತು ಇತರೆ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸುವುದರ ಮೂಲಕ ರಾಜ್ಯ ಅಬಕಾರಿ ನೀತಿಗಳು ಮತ್ತು ಪ್ರಕ್ರೀಯೆಗಳನ್ನು ಜಾರಿಗೊಳಿಸುವುದು ಮತ್ತು ಸಂಬಂಧಿಸಿದ ತೆರಿಗೆಗಳ ಸಂಗ್ರಹಣೆಯಲ್ಲಿ ನಿಗಾವಹಿಸುವುದು.

ಇ-ಪಾವತಿ ಸಹಾಯವಾಣಿ ಸಂಖ್ಯೆ:  : 9449595775

ಇ-ಪಾವತಿ ಇ-ಮೇಲ್ ವಿಳಾಸ: ecepayment@gmail.com

ಖಜಾನೆ -II ಸಹಾಯವಾಣಿ ಸಂಖ್ಯೆ: : 080-22347766

ಖಜಾನೆ -II ಇ-ಮೇಲ್ ವಿಳಾಸ  : 
k2.helpdesk@karnataka.gov.in

ಖಜಾನೆ -II

ಅಬಕಾರಿ ಇ-ಪಾವತಿ

ಅಪರಾಧ ತಂತ್ರಾಂಶ

ಅಬಕಾರಿ ಸೇವೆಗಳು ಆನ್‍ಲೈನ್‍ ಮುಖಾಂತರ

ಇಓಎಲ್‍ಆರ್‍ಎಸ್‍