ಇಲಾಖಾ ವಿವರ

I. ಇಲಾಖಾ ರಚನೆ

I.ಅಬಕಾರಿ ಆಯುಕ್ತರು ಹಿರಿಯ ಐ.ಎ.ಎಸ್. ಶ್ರೇಣಿಯವರಾಗಿದ್ದು ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಇಲಾಖೆಯ ಕೇಂದ್ರ ಸ್ಥಳವು ಬೆಂಗಳೂರಿನಲ್ಲಿರುತ್ತದೆ. ಇಲಾಖೆಯ ವ್ಯವಹಾರಗಳಲ್ಲಿ ಅಬಕಾರಿ ಆಯುಕ್ತರಿಗೆ ಸಹಕರಿಸಲು ಹೆಚ್ಚುವರಿ ಅಬಕಾರಿ ಆಯುಕ್ತರು (ಅಪರಾಧ ಮತ್ತು ಜಾರಿ), ಹೆಚ್ಚುವರಿ ಅಬಕಾರಿ ಆಯುಕ್ತರು (ಭಾ.ತ.ಮ), ಅಲ್ಲದೆ ಅಬಕಾರಿ ಜಂಟಿ ಆಯುಕ್ತರು (ಡಿಸ್ಟಲರಿ ಮತ್ತು ಬ್ರಿವರಿ), ಉಪ ಆಯುಕ್ತರು (ಆಡಳಿತ), ಒಬ್ಬರು ಅಬಕಾರಿ ಉಪ ಆಯುಕ್ತರು (ಕಾನೂನು), ಅಬಕಾರಿ ಆಯುಕ್ತರ ಕೇಂದ್ರ ಸ್ಥಾನಿಕ ಸಹಾಯಕರು I ಮತ್ತು II (ಅಬಕಾರಿ ಅದಿsೀಕ್ಷಕರ ಶ್ರೇಣಿ) ಒಳಗೊಂಡಂತೆ 5 ಅಬಕಾರಿ ಅದಿsೀಕ್ಷಕರು. 6 ಅಬಕಾರಿ ಉಪ ಅದಿsೀಕ್ಷಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ನಿಯೋಜನೆ ಮೇರೆಗೆ ಒಬ್ಬರು ಉಪ ನಿರ್ದೇಶಕರು (ಸಾಂಖ್ಯಿಕ), ಒಬ್ಬರು ಸಹಾಯಕ ನಿರ್ದೇಶಕರು (ಸಾಂಖ್ಯಿಕ), ಮಹಾಲೇಖಪಾಲರ ಕಛೇರಿಯಿಂದ ನಿಯೋಜನೆ ಮೇರೆಗೆ ಒಬ್ಬರು ಹಿರಿಯ ಲೆಕ್ಕಾದಿsಕಾರಿಗಳು ಮತ್ತು ಒಬ್ಬರು ಹಿರಿಯ ಆಡಿಟ್ ಅಧಿಕಾರಿಗಳು (ಲೆಕ್ಕ ಪರಿಶೋದನೆ) ಅಬಕಾರಿ ಆಯುಕ್ತರಿಗೆ ಸಹಾಯಕರಾಗಿರುತ್ತಾರೆ.

         2.       ಅಬಕಾರಿ ಜಂಟಿ ಆಯುಕ್ತರವರ ನೇತೃತ್ವದಲ್ಲಿರುವ ರಾಜ್ಯ ಅಬಕಾರಿ ವಿಚಕ್ಷಣ ದಳವು ರಾಜ್ಯ ಕಾರ್ಯವ್ಯಾಪ್ತಿ ಅಧಿಕಾರ ಹೊಂದಿದ್ದು, ಬೆಂಗಳೂರು ಇದರ ಕೇಂದ್ರಸ್ಥಾನವಾಗಿದ್ದು, ಅಬಕಾರಿ ಆಯುಕ್ತರ ನೇರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ. ವಿಚಕ್ಷಣೆ, ಮಾಹಿತಿ ಪೂರೈಕೆ, ಕಳ್ಳಭಟ್ಟಿ ತಯಾರಿಕೆ, ನಕಲಿ ಮದ್ಯ ತಯಾರಿಕೆ, ಅಕ್ರಮ ಮದ್ಯ ಹಾಗೂ ಮದ್ಯಸಾರದ ಸಾಗಾಣಿಕೆ, ಅಬಕಾರಿ ಶುಲ್ಕ ತಪ್ಪಿಸಿಕೊಳ್ಳುವುದು ಇತ್ಯಾದಿ ಅಬಕಾರಿ ನಿಯಮಗಳ ಉಲ್ಲಂಘನೆ ತಡೆಯುವಲ್ಲಿ ಅಬಕಾರಿ ಆಯುಕ್ತರಿಗೆ ಒತ್ತಾಸೆಯಾಗಿ ಕಾರ್ಯನಿರ್ವಹಿಸುತ್ತದೆ. ಅದರ ಜೊತೆಗೆ ಬೆಂಗಳೂರು ನಗರದಲ್ಲಿ 4 ವಿಚಕ್ಷಣ ದಳಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಂದು ದಳಕ್ಕೆ ಅಬಕಾರಿ ಅದಿsೀಕ್ಷಕರೊಬ್ಬರು ಮುಖ್ಯಸ್ಥರಾಗಿದ್ದು, ಇವರು ಅಬಕಾರಿ ಉಪ ಆಯುಕ್ತರು ನಗರ ಜಿಲ್ಲೆ (ಪೂರ್ವ, ಪಶ್ವಿಮ, ಉತ್ತರ ಮತ್ತು ದಕ್ಷಿಣ) ಇವರ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿದ್ದು, ಅಬಕಾರಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಜಾರಿ ಮತ್ತು ತನಿಖಾ ಕಾರ್ಯ ನಿರ್ವಹಿಸಲು ಸಹಕರಿಸುತ್ತಿರುತ್ತಾರೆ.

         3.         ಮುಂದುವರೆದಂತೆ, ಇಲಾಖೆಯ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಜಾರಿ ಮತ್ತು ತನಿಖೆ ಕೆಲಸ ನಿರ್ವಹಣೆಯನ್ನು ಚುರುಕುಗೊಳಿಸಲು ರಾಜ್ಯವನ್ನು 6 ವಿಭಾಗಗಳನ್ನಾಗಿ ವಿಂಗಡಿಸಿದೆ. ಪ್ರತಿಯೊಂದು ವಿಭಾಗವು ಅಬಕಾರಿ ಜಂಟಿ ಆಯುಕ್ತರವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ವಿಭಾಗದ ಅದಿsಕಾರ ವ್ಯಾಪ್ತಿ ಈ ಕೆಳಕಂಡಂತಿದೆ;

 


ಕ್ರ.
ಸಂ.

ವಿಭಾಗಗಳು

ವ್ಯಾಪ್ತಿಗೊಳಪಡುವ ಜಿಲ್ಲೆಗಳು

ಬೆಂಗಳೂರು ವಿಭಾಗ

ಬೆಂಗಳೂರು ನಗರ, ಬೆಂಗಳೂರು  ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು.

 2

ಬೆಳಗಾವಿ ವಿಭಾಗ

ಬೆಳಗಾವಿ, ಬಿಜಾಪೂರ, ಬಾಗಲಕೋಟೆ, ಧಾರವಾಡ
ಮತ್ತು ಹಾವೇರಿ ಜಿಲ್ಲೆಗಳು.

 3

ಗುಲ್ಬರ್ಗಾ ವಿಭಾಗ

ಗುಲ್ಬರ್ಗಾ, ರಾಯಚೂರು ಮತ್ತು ಬೀದರ್, ಯಾದಗಿರಿ ಜಿಲ್ಲೆಗಳು.

 4

ಹೊಸಪೇಟೆ ವಿಭಾಗ

ಬಳ್ಳಾರಿ, ಚಿತ್ರದುರ್ಗ,   ದಾವಣಗೆರೆ, ಕೊಪ್ಪಳ ಮತ್ತು ಗದಗ ಜಿಲ್ಲೆಗಳು.

 5

ಮಂಗಳೂರು ವಿಭಾಗ

ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ
ಮತ್ತು ಶಿವಮೊಗ್ಗ ಜಿಲ್ಲೆಗಳು.

 6

ಮೈಸೂರು ವಿಭಾಗ

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ
ಮತ್ತು ಚಿಕ್ಕಮಗಳೂರು ಜಿಲ್ಲೆಗಳು.

 

         4.       ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಓರ್ವ ಅಬಕಾರಿ ಉಪ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದು, ಸದರಿ ಅಧಿಕಾರಿಯವರು, ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965 ಮತ್ತು ಇತರೆ ಶಾಸನಬದ್ಧ ಕಾಯ್ದೆಗಳು ಹಾಗೂ ನಿಯಮಗಳಡಿಯಲ್ಲಿ ಅಬಕಾರಿ ಉಪ ಆಯುಕ್ತರು ಶಾಸನಬದ್ಧ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜಿಲ್ಲೆಗಳಲ್ಲಿನ ಜಾರಿ ತನಿಖಾ ಕಾರ್ಯ ಚಟುವಟಿಕೆಗಳು ಅಬಕಾರಿ ಉಪ ಆಯುಕ್ತರ ಜವಾಬ್ದಾರಿಯಾಗಿರುತ್ತದೆ. ರಾಜ್ಯದ ಬೆಂಗಳೂರು ನಗರ ಜಿಲ್ಲೆಯ 4 ಅಬಕಾರಿ ಜಿಲ್ಲೆಗಳನ್ನೊಳಗೊಂಡಂತೆ ಒಟ್ಟು 33 ಅಬಕಾರಿ ಜಿಲ್ಲೆಗಳಿದ್ದು ಪ್ರತಿ ಜಿಲ್ಲೆಗೆ ಒಬ್ಬ ಅಬಕಾರಿ ಉಪ ಆಯುಕ್ತರು ಇರುತ್ತಾರೆ. ಕೇಂದ್ರ ಕಛೇರಿಯಲ್ಲಿ ಒಂದು ಹುದ್ದೆ ಇದ್ದು, ಒಟ್ಟು 34 ಅಬಕಾರಿ ಉಪ ಆಯುಕ್ತರ ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ.

         5.    ಅಬಕಾರಿ ಅದಿsೀಕ್ಷಕರುಗಳು, ಅಬಕಾರಿ ಉಪ ಅಧೀಕ್ಷಕರುಗಳು, ಅಬಕಾರಿ ನಿರೀಕ್ಷಕರುಗಳು, ಅಬಕಾರಿ ಉಪ ನಿರೀಕ್ಷಕರುಗಳು, ಹಿರಿಯ ರಕ್ಷಕರು ಮತ್ತು ರಕ್ಷಕರು ಇಲಾಖೆಯ ಜಾರಿ ಮತ್ತು ತನಿಖಾ ಚಟುವಟಿಕೆ ನಡೆಸುವ ಹುದ್ದೆಗಳಾಗಿರುತ್ತವೆ. ಅಬಕಾರಿ ಇಲಾಖೆಯಲ್ಲಿ 63 ಉಪ ವಿಭಾಗಗಳು ಅಬಕಾರಿ ಉಪ ಅಧೀಕ್ಷಕರ ಮುಖ್ಯಸ್ಥಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಸದರಿ ಅಬಕಾರಿ ಉಪ ಅದಿsೀಕ್ಷಕರುಗಳು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆಡಳಿತ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅಬಕಾರಿ ಅದಿsೀಕ್ಷಕರುಗಳು/ಅಬಕಾರಿ ಉಪ ಅದಿsೀಕ್ಷಕರುಗಳು/ ಅಬಕಾರಿ ನಿರೀಕ್ಷಕರ ವೃಂದಗಳಲ್ಲಿನ ಅದಿsಕಾರಿಗಳಿಗೆ ಡಿಸ್ಟಿಲರೀಸ್, ಬ್ರಿವರೀಸ್ ಮತ್ತು ವೈನರೀಸ್ ಕಛೇರಿಗಳಲ್ಲಿ ವ್ಯವಹಾರಗಳ ಮೇಲ್ವಿಚಾರಣೆ ನೋಡಲು ಮತ್ತು ಅಬಕಾರಿ ಕಾನೂನನ್ನು ಜಾರಿಗೊಳಿಸಲು ತೈನಾತಿಸಲ್ಪಟ್ಟ ಇತರೆ ಸಿಬ್ಬಂದಿಗಳು ಸಹಕರಿಸುತ್ತಾರೆ. ಅಬಕಾರಿ ಇಲಾಖೆಯು ಮುಖ್ಯ ರಾಸಾಯನಿಕ ತಜ್ಞರ ಮುಖ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕೇಂದ್ರ ರಾಸಾಯನಿಕ ಪ್ರಯೋಗಾಲಯವನ್ನೂ ಸಹ ಹೊಂದಿದೆ.  

ಇಲಾಖೆಯ ಅನುಮೋದಿತ ಪೋಸ್ಟ್ಗಳ ಸಂಖ್ಯೆ 5191 ಆಗಿದೆ, ಇದರಲ್ಲಿ 3066 ತುಂಬಿದೆ ಮತ್ತು 2185 ಉಳಿದಿದೆ.